Saturday, June 8, 2013

yenendu na helali

ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಜೇನು ಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
ಹನಿಹನಿ ಜೇನು ಸೇರಿಸಲೇನು
ಬೇಕೂ ಎಂದಾಗ ತನದೆನ್ನುವ
ಕೆಸರಿನ ಹೂವು ವಿಷದಾ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು
ಎಂದೆಂದೂ ಎಂದೆಂದೂ ಎಂದೆಂದೂ
ಪಡೆಯುವುದೊಂದು ಕೊಡುವುದುವೊoದು
ಸ್ವಾರ್ಥಿ ತಾನಾಗಿ ಮೆರೆದಾಡುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

3 comments: