Saturday, June 8, 2013

neenendare nanage ista kano

ನೀನೆಂದರೆ ನನಗೆ ಇಷ್ಟ ಕಣೋ....
ನಿನ್ನಿಂದಲೇ ಪ್ರೀತಿ ಚೆಂದ ಕಣೋ...
ಅಮರ ಮಧುರ ಮಧುರ ಅಮರ ಅನುರಾಗ...
ಜೊತೆ ನೀನಿರಲು ಜೋತೆಯಾಗಿರಲು ಸ್ವರ್ಗ....
ನೀನೆಂದರೆ ನನಗೆ ಇಷ್ಟ ಕಣೋ...
ಹೋ ಹೋ...ನೀನೆಂದರೆ ನನಗು ಅಷ್ಟೇ ಕಣೆ....

ಜೊತೆಗೆ ಜೊತೆಗೆ ನಡೆದು ಬೆರಳನು ಬೆಸೆಯುವ ತವಕ
ಹೃದಯ ಹೃದಯ ಮಿಡಿದು ಹೊಸ ಬಗೆ ಅನುಭವ ಪುಳಕ
ಮನಸೇ ಇರದ ನಿದಿರೆ ಏಕೆ.. .ನೀನೆ ಇರದ ಬದುಕಿನ್ನೇಕೆ...
ಎಷ್ಟೋ ಒಲವ ಗುನಿಸಿದ ಮೇಲು... ನಮ್ಮ ಒಲವೆ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ...
ಹೋ ಹೋ ...ನೀನಿಲ್ಲದೆ ಏನು ಇಲ್ಲ ಕಣೆ...

ಪ್ರಣಯ ಜನಿಸೋ ಸಮಯ...ಮನಸಿಗೂ ಮನಸಿಗೂ ಮಿಲನ....
ಕೊನೆಯವರೆಗೂ ನಿಲದ...ಸಿಹಿಯಿದು ಒಲವಿನ ಕವನ...
ಪುನಃ ಪುನಃ ಬಯಸಿ ಸನಿಹ...
ತರಹ ತರಹ ಹೊಸಡಿ ವಿರಹ...
ಇಷ್ಟ ಆಗೋ ಅರಳು ಮರಳು...ಇನ್ನೂ ಬೇಕು ಅನಿಸೋ ಅಮಲು...
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ...
ಹೇ ಹೇ.. ನಿನ್ನಿಂದಲೇ ಬದುಕು ಚೆಂದ ಕಣೆ....

ಅಮರ ಮಧುರ ಮಧುರ ಅಮರ ಅನುರಾಗ....
ಜೊತೆ ನೀನಿರಲು ಜೋತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ...
ಹೋ ಹೋ...ನೀನೆಂದರೆ ನನಗು ಅಷ್ಟೇ ಕಣೆ....

1 comment:

  1. What does this line mean ತರಹ ತರಹ ಹೊಸಡಿ ವಿರಹ.

    ReplyDelete