Saturday, June 8, 2013

neenendare nannolage

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೆ ಹೇಳಿಬಿಡು ನಿನಗು ಕೂಡ ಹೀಗೆನಾ...
ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ... ಎನೊ ಒಂದು ಸಂಚಲನ...

ತಂದೆನು ಪಿಸುಮಾತು ಜೇಬಲ್ಲಿ, ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ.. ಮರೆತು ಮೈಮನ...
ನಿನ್ನ ಬೆರಳು ಹಿಡಿದು ನಾನು ... ನೀರ ಮೇಲೆ ಬರೆಯಲೇನು...
ನಿನ್ನ ನೆರಲು ಸುಳಿಯುವಲ್ಲೂ... ಹೂವ ತಂದು ಸುರಿಯಲೇನು
ನಂಬಿಕೂತ ಹುಂಬ ನಾನು... ನೀನು ಹೀಗೆನ...

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ

ಹೂವಿನಮಳೆ ನೀನು ಕನಸಲ್ಲಿ... ಮೊಹದಸೆಳೆ ನೀನು ಮನಸಲ್ಲಿ
ಮಾಯದಕಳೆ ನೀನು ಎದೆಯಲ್ಲಿ... ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ... ಬನ್ದು ಪಾರುಮಡು ನೀನು
ಒಂದೆ ಕನಸು ಕಾಣುವಾಗಾ... ನಾನು ನೀನು ಬೆರೆಯೆನು
ಶರಣುಬಂದ ಜ್ವರ ನಾನು... ನೀನು ಹೀಗೆನ

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಒ ಜೀವವೆ ಹೆಳಿಬಿಡು ನಿನಗು ಕೂಡ ಹೀಗೆನಾ
ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ... ಎನೊ ಒಂದು ಸಂಚಲನ...

No comments:

Post a Comment