Saturday, June 8, 2013

o nallane savi matona

ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು ||ಓ ನಲ್ಲನೆ||

ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತೂ ಹರುಷವ
ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ನಾವೆಂದಂದೂ ಹೀಗೊಂದಾಗಿ
ಆನಂದ ಹೊಂದುವಾ

ಓ ಅರಗಣಿ ಸವಿ ಮಾತೊಂದ ನುಡಿವೆಯಾ..

ನಾ ನಿನ್ನ ಬಿಡೆನೂ ಎಂದಿಗೂ

No comments:

Post a Comment