Saturday, June 8, 2013

jeevaveene

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೇ
ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು
ಮಿಲನ ಮಹೋತ್ಸವವಿಂದು
ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ
ಕನಸಿನ ರಾತ್ರಿಯು ಕಳೆದು
ಬಂದಿರೆ ನೆನಿಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

No comments:

Post a Comment