Saturday, June 8, 2013

akashave beelali mele

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇರುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ ||

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

ಹಸೆಮಣೆಯು ನಮಗೆ ಇಂದು ನಾವ್ ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಳರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೇರೆತೂ ಸ್ವರ್ಗವಾಯ್ತು ||

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

yenendu na helali

ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಜೇನು ಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
ಹನಿಹನಿ ಜೇನು ಸೇರಿಸಲೇನು
ಬೇಕೂ ಎಂದಾಗ ತನದೆನ್ನುವ
ಕೆಸರಿನ ಹೂವು ವಿಷದಾ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು
ಎಂದೆಂದೂ ಎಂದೆಂದೂ ಎಂದೆಂದೂ
ಪಡೆಯುವುದೊಂದು ಕೊಡುವುದುವೊoದು
ಸ್ವಾರ್ಥಿ ತಾನಾಗಿ ಮೆರೆದಾಡುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

neenendare nannolage

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೆ ಹೇಳಿಬಿಡು ನಿನಗು ಕೂಡ ಹೀಗೆನಾ...
ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ... ಎನೊ ಒಂದು ಸಂಚಲನ...

ತಂದೆನು ಪಿಸುಮಾತು ಜೇಬಲ್ಲಿ, ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ.. ಮರೆತು ಮೈಮನ...
ನಿನ್ನ ಬೆರಳು ಹಿಡಿದು ನಾನು ... ನೀರ ಮೇಲೆ ಬರೆಯಲೇನು...
ನಿನ್ನ ನೆರಲು ಸುಳಿಯುವಲ್ಲೂ... ಹೂವ ತಂದು ಸುರಿಯಲೇನು
ನಂಬಿಕೂತ ಹುಂಬ ನಾನು... ನೀನು ಹೀಗೆನ...

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ

ಹೂವಿನಮಳೆ ನೀನು ಕನಸಲ್ಲಿ... ಮೊಹದಸೆಳೆ ನೀನು ಮನಸಲ್ಲಿ
ಮಾಯದಕಳೆ ನೀನು ಎದೆಯಲ್ಲಿ... ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ... ಬನ್ದು ಪಾರುಮಡು ನೀನು
ಒಂದೆ ಕನಸು ಕಾಣುವಾಗಾ... ನಾನು ನೀನು ಬೆರೆಯೆನು
ಶರಣುಬಂದ ಜ್ವರ ನಾನು... ನೀನು ಹೀಗೆನ

ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಒ ಜೀವವೆ ಹೆಳಿಬಿಡು ನಿನಗು ಕೂಡ ಹೀಗೆನಾ
ನೀನೆಂದರೆ ನನ್ನೊಳಗೆ ಎನೊ ಒಂದು ಸಂಚಲನ... ಎನೊ ಒಂದು ಸಂಚಲನ...

soorya ninna tayiyanegu

ಸೂರ್ಯ ನಿನ್ನ ತಾಯಿ ಆಣೆಗೂ... ಚಂದ್ರ ನಿನ್ನ ತಂದೆ ಆಣೆಗೂ...
ನನ್ನ ಮಮ್ಮಿ ಡ್ಯಾಡಿ ಆಣೆಗೂ... ಪೋಲಿ ಇವನು... ಪೋಲಿ ಇವನು...

ಸೂರ್ಯ ನಿನ್ನ ತಾಯಿ ಆಣೆಗೂ... ಚಂದ್ರ ನಿನ್ನ ತಂದೆ ಆಣೆಗೂ...
ನನ್ನ ಮಮ್ಮಿ ಡ್ಯಾಡಿ ಆಣೆಗೂ... ಪೋಲಿ ಇವನು... ಪೋಲಿ ಇವನು...

ಜಲ್ ಎಂದಿದೆ ಓ ಓ ಓ... ನನ್ನ.. ಎದೆ...
ತಡ ಮಾಡದೇ ಓ ಓ ಓ... ಶರಣಾಗಿದೆ..
ಯಾಮಾರಿಸೊ ಹುಡುಗರ ಸಾಲಿನ ಮೊದಲನೇ ಚೋರನು..
ಹಾಗಿದ್ದರು ಪ್ರೀತಿಸ ಬೇಕು ಎನಿಸುವ ರಾಜನು..
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು..... ಪೋಲಿ ಇವನು.... ಪೋಲಿ ಇವನು....

(ಬಾರೂ ಪೋಲಿ.... ಬಾರೂ ಪೋಲಿ... ಬಾರೂ ಪೋಲಿ... ಬಾರೂ ಪೋಲಿ...)

ಎಲ್ಲಿದ್ದರೂ ಆ ಆ ಆ ಆ.. ಇಸ್ಟು ದಿನ.
ನಾನವನಿಗೆ ಆ ಆ ಆ ಆ.. ಇಷ್ಟವಾದೆನ..
ಊರಲ್ಲಿರೋ ಪುಂಡರನೆಲ್ಲ ಹೆದರಿಸೊ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ ಪೋಲಿ ಇವನು.... ಪೋಲಿ ಇವನು....

ಓ ಓ.. ಸೂರ್ಯ ನಿನ್ನ ತಾಯಿ ಆಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... ಪೋಲಿ ಇವನು...

baluvanta hoove baduva ase yeke (rajkumar)

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮದ್ಯ ಮನಗಳಿನ್ದ ಚಿಂತೆ ಬೇಳೆವುದಂತೆ

ಅಂಖ್ಯೆ ಇರದ ಮನಸನು ದಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ

besuge besuge

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ<
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

chaluveye ninna nodalu

ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...

ನೀ ನಗುತಿರೆ ಹೂವು ಅರಳುವುದು
ನೀ ನಡೆದರೆ ಲತೆಯು ಬಳುಕುವುದು

ಪ ನಿ ಸ ರಿ ಸ ನಿ ಮ ಪ ನಿ ಸ ನಿ ಧ
ದ ಪ ಮ ಗ ಮ ಪ
ಗ ಮ ಪ ಸ ಗ ಮ ಪ ಸ ಗ ಮ ಪ ಸ 

ನೀ ನಗುತಿರೆ ಹೂವು ಅರಳುವುದು
ನೀ ನಡೆದರೆ ಲತೆಯು ಬಳುಕುವುದು
ಪ್ರೇಮ ಗೀತೆ ಹಾಡಿದಾಗ
ಪ್ರೇಮ ಗೀತೆ ಹಾಡಿದಾಗ
ಕೋಗಿಲೆ ಕೂಡ ನಾಚುವುದು
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...

ಈ ಸಂತಸ ಎಂದು ಹೀಗೆ ಇರಲಿ
ಈ ಸಂಭ್ರಮ ಸುಖವ ತುಂಬುತ ಬರಲಿ

ಪ ನಿ ಸ ರಿ ಸ ನಿ ಮ ಪ ನಿ ಸ ನಿ ಧ
ದ ಪ ಮ ಗ ಮ ಪ
ಗ ಮ ಪ ಸ ಗ ಮ ಪ ಸ ಗ ಮ ಪ ಸ 

ಈ ಸಂತಸ ಎಂದು ಹೀಗೆ ಇರಲಿ
ಈ ಸಂಭ್ರಮ ಸುಖವ ತುಂಬುತ ಬರಲಿ
ಇಂದು ಬಂದ ಹೊಸ ವಸಂತ
ಇಂದು ಬಂದ ಹೊಸ ವಸಂತ
ಕನಸುಗಳ ನನಸಾಗಿಸಲಿ
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...