Saturday, June 8, 2013

nammoora mandara hoove

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು |ಪಲ್ಲವಿ|

||ಪಲ್ಲವಿ||
ನಮ್ಮೂರ ಮಂದಾರ ಹೂವೇ

ಕಣ್ಣಲ್ಲಿ ಕರೆದು
ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ

ಅನುರಾಗ ಹೊಳೆದು
ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ ಪ್ರೇಮದ
ಸೊಗಸಾದ ಕಾರಂಜಿ ಮಿಡಿದೆ

||ಪಲ್ಲವಿ||

ಒಡಲಾಳ ಮೊರೆದು
ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ

ಋತುಮಾನ ಮೀರಿ
ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ
ಇನಿದಾದ ಆನಂದ ತಂದೆ

jeevaveene

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೇ
ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು
ಮಿಲನ ಮಹೋತ್ಸವವಿಂದು
ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ
ಕನಸಿನ ರಾತ್ರಿಯು ಕಳೆದು
ಬಂದಿರೆ ನೆನಿಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

beladingalagi baa

ಬೆಳದಿಂಗಳಾಗಿ ಬಾ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಣ್ಣಲ್ಲಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ
ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಾವೇರಿ ತಾಯಿ ನನ್ನ
ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ ಬೆಳಕಾಗಲು
ಆ ದೇವಿ ಆಣೆ ನೀನೆ
ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

saviyo saviyo

ಹೆ :ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ
ಗ೦:ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಹೆ :ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಗ೦:ಸೂರ್ಯನ೦ತೆ ನಾ ಹೊಳೆವಾಗ ಭೂಮಿಯ೦ತೆ ನೀ ಬಾ
ಹೆ :ಭೂಮಿಯ೦ತೆ ನಾ ಕರೆವಾಗ ಮಳೆಬಿಲ್ಲ೦ತೆ ನೀ ಬಾ

ಗ೦:ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ

ಹೆ: ನೀ ಬರುವ ದಾರಿಯಲ್ಲಿ ಒಲವೆ೦ಬ ರ೦ಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಗ೦:ಒಡಲಾಳ ತ೦ತು ಸ್ನೇಹ ಒಡಮೂಡಿ ಬ೦ತು ಮೋಹ
ಕತೆಯಾಗಿ ಕಾಡಿತು ಮೂಡಿತು
ಹೆ :ಆ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ಗ೦:ಆ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ 

ಹೆ: ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ

ಗ೦:ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತ೦ಪಾಯ್ತು ಜೀವಕೆ ಭಾವಕೆ
ಹೆ: ಹಾಹಾಹ ಮು೦ಜಾನೆ ಮ೦ಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗು
ಗ೦: ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಚೆಯ ಹೆಣ್ಣಲ್ಲವೆ
ಹೆ : ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಚೆಯ ಗ೦ಡಲ್ಲವೆ

ಗ೦: ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ
ಹೆ: ಸವಿಯೊ ಸವಿಯೊ ಒಲವ ನೆನಪು ಎದೆಯ ನಿಧಿಯೆ ಅನುರಾಗ
ಗ೦: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಹೆ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಗ೦: ಸೂರ್ಯನ೦ತೆ ನಾ ಹೊಳೆವಾಗ ಭೂಮಿಯ೦ತೆ ನೀ ಬಾ
ಹೆ: ಭೂಮಿಯ೦ತೆ ನಾ ಕರೆವಾಗ ಮಳೆಬಿಲ್ಲ೦ತೆ ನೀ ಬಾ

oolavina udugore kodalenu

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

tuntooru alli neera hadu

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ

yeneno aase

ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಲತೆಗಳು ಬಳುಕುತಿವೆ ನಿನ್ನ೦ತೇ ಆಡಿ
ಸುಮಗಳು ನಗುತಲಿವೆ ನಿನ್ನನ್ನೂ ನೋಡಿ
ಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿ
ಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾ
ತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾ
ಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡು
ಸ೦ತೋಷ ಕೊಡು ಕೊಡು ಬಾ ನಲ್ಲೇ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ